ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ್ದ ಹೆತ್ತೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಗ್ರಾಮದ ಮುಖ್ಯಸ್ಥ ಕುಮಾರಯ್ಯ, ತಲೆಮಾರುಗಳಿಂದ ತಳ ಗುಡಿಸಿ, ಒಂದು ಸೂರು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ದಲಿತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದ ಅಧಿಕಾರಿ ಗಳಿಗೆ ಇದೀಗ ಹಿನ್ನಡೆಯಾಗಿದೆ. ಆದರೆ ಕಾನೂನಾತ್ಮಕವಾಗಿ ಅಲ್ಲಿ ವಾಸವಿರುವ ದಲಿತರು ಯಾವುದೇ ಬೇರೆ ಜಮೀನನ್ನು ಒತ್ತುವರಿ ಮಾಡಿಲ್ಲ ಎಂಬುದು ಸರ್ವೇ ಮೂಲಕ ರುಜುವಾತಾಗಿದೆ.
ಗ್ರಾಮದಲ್ಲಿನ ಸರ್ವೇ ನಂಬರ್ ೩೦೨ ರಲ್ಲಿ ತಲೆ ಮಾರುಗಳಿಂದ ವಾಸವಿರುವ ವಾಸಿಗಳ ಬಳಿ ಈ ಸ್ಥಳಕ್ಕೆ ಸಂಬAಧಪಟ್ಟ ಹಂಗಾಮಿ ಸಾಗುವಳಿ ಪತ್ರವಿದ್ದು, ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದು ೧೯೭೭-೭೮ನೇ ಸಾಲಿನಲ್ಲಿ ದಲಿತರು ಹಾಗೂ ಇತರ ಸಮುದಾಯದವರು ವಾಸವಿರುವ ಮನೆಗಳ ವಿಸ್ತೀರ್ಣಕ್ಕೆ ಸಂಬAಧಿಸಿದAತೆ ಅಂದಿನ ತಾಲ್ಲೂಕು ಆಡಳಿತ ವತಿಯಿಂದ ಫಲಾನುಭವಿಗಳನ್ನು ಗುರುತಿಸಿ ವೈಯುಕ್ತಿಕವಾಗಿ ಹಂಗಾಮಿ ಸಾಗುವಳಿ ಪತ್ರವನ್ನು ನೀಡಿದೆ. ಅಲ್ಲಿಂದ ಇಲ್ಲಿಯ ವರೆಗೂ ಸರ್ವೆ ನಂ.೩೦೨ರಲ್ಲಿ ಸುಮಾರು ೬೩ ಕುಟುಂಬಗಳು ವಾಸ ಮಾಡುತ್ತಿವೆ.
೨೦೦೪ ಫೆಬ್ರವರಿ ೩ ರಲ್ಲಿ ಸ್ಥಳೀಯ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸೇರಿ ಎಂ.ಆರ್. ನಂ.೪೯ನ್ನು ದಾಖಲಿಸಿ ದಲಿತರಿಗೆ ಮಂಜೂರಾಗಿದ್ದ ಸರ್ವೆ ನಂ.೩೦೨ರ ೨ ಎಕರೆ ಜಮೀನನ್ನು ಗ್ರಾಮ ಪಂಚಾಯಿತಿ ಎಂದು ನಮೂದು ಮಾಡಿರುತ್ತಾರೆ. ಜೊತೆಗೆ ಸರ್ವೆ ನಂಬರ್ನಲ್ಲಿ ಒಟ್ಟು ವಿಸ್ತೀರ್ಣ ೬ ಎಕರೆ ೨೭ ಗುಂಟೆ ಜಮೀನಿದ್ದು, ೨ ಎಕರೆ ೨೭ ಗುಂಟೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಹಾಗೂ ೨ ಎಕರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಉಳಿದ ೨ ಎಕರೆ ಪರಿಶಿಷ್ಟ ಜಾತಿ ಎಂದು ಉದ್ದೇಶ ಪೂರ್ವಕವಾಗಿ ದಿನಾಂಕ ೧೯೭೭ರಿಂದಲೂ ಸರ್ಕಾರಿ ದಾಖಲೆಯಲ್ಲಿ ದಾಖಲಾಗಿದೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಇಲ್ಲಿ ವಾಸವಿರುವ ದಲಿತ ಕುಟುಂಬಗಳ ಸ್ಥಳಗಳಿಗೆ ಖಾಯಂ ಸಾಗುವಳಿ ಚೀಟಿ, ಇ-ಸ್ವತ್ತು, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್.ಅರ್.ಕುಮಾರಯ್ಯ, ಹೂವಣ್ಣ, ದೊಡ್ಡಯ್ಯ, ಮಲ್ಲೇಶ್
ಎನ್.ಡಿ, ಚಂದ್ರಯ್ಯ, ಸುಬ್ಬಯ್ಯ, ಗೌರಮ್ಮ, ಸುಶೀಲಮ್ಮ, ಜಯಂತಿ, ಹರಿಣಿ, ರತ್ನಮ್ಮ, ಯಶೋಧ, ಸುಶೀಲ, ರಮೇಶ್, ಕರ್ಣ, ರವಿ, ಶಿವಕುಮಾರ್, ಧನು, ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.